Revelation of John 11

ದೇವರ ಇಬ್ಬರು ಸಾಕ್ಷಿಗಳು

1ತರುವಾಯ
11:1 ಜೆಕ. 2:1, 2; ಯೆಹೆ. 40. 3:5; ಪ್ರಕ. 21:15, 16:
ಅಳತೆಗೊಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು, <<ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆಮಾಡುವವರನ್ನು ಎಣಿಕೆಮಾಡು.
2
11:2 ಯೆಹೆ. 40. 17, 20:
ಆಲಯದ ಹೊರಗಿರುವ ಹೊರಾಂಗಣವನ್ನು ಅಳೆಯದೆ ಬಿಟ್ಟುಬಿಡು,
11:2 ಲೂಕ. 21:24:
ಅದು ಅನ್ಯಜನರಿಗಾಗಿ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು
11:2 ಪ್ರಕ. 12:6; 13:5:
ನಲವತ್ತೆರಡು ತಿಂಗಳು ತುಳಿದಾಡುವರು.

3ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು
11:3 ಯೆಶಾ. 20:2:
ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.>>
4ಭೂಲೋಕದ ಒಡೆಯನ ಮುಂದೆ ನಿಂತಿರುವ
11:4 ಜೆಕ. 4:3, 11, 14:
ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪ ಸ್ತಂಭಗಳೂ ಇವರೇ.
5ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ
11:5 2 ಅರಸು. 1:10, 12; ಯೆರೆ. 5:14:
ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಕೇಡನ್ನು
11:5 ಅರಣ್ಯ. 16:29, 35:
ಉಂಟುಮಾಡಬಯಸುವವರಿಗೆ ಆ ರೀತಿಯಾಗಿ ಹತರಾಗಬೇಕು.

6
11:6 ಅರಣ್ಯ. 17:1; ಲೂಕ. 4:25; ಯಾಕೋಬ. 5:17:
ಅವರು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಅವರಿಗೆ ಇರುವುದು. ಇದಲ್ಲದೆ ಅವರಿಗೆ ಇಷ್ಟಬಂದಾಗೆಲ್ಲಾ
11:6 ವಿಮೋ. 7:19:
ನೀರು ರಕ್ತವಾಗುವಂತೆ ಮಾಡುವುದಕ್ಕೂ
11:6 ವಿಮೋ. 7-10; 1 ಸಮು. 4:8:
ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹಿಂಸಿಸುವುದಕ್ಕೂ ಅಧಿಕಾರವುಂಟು.

7ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ,
11:7 ಪ್ರಕ. 9:1:
ಅಧೋಲೋಕದಿಂದ ಬರುವ
11:7 ಪ್ರಕ. 17:8; ಪ್ರಕ. 13:1:
ಮೃಗವು
11:7 ದಾನಿ. 7:21:
ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು.

8ಈ ಸಾಕ್ಷಿಗಳ ಶವಗಳು
11:8 ಪ್ರಕ. 16:19; 17:18; 18:10:
ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಸಾಂಕೇತಿಕವಾಗಿ
11:8 ಯೆಶಾ. 1:9, 10; 3:9:
ಸೊದೋಮ್ ಎಂದು,
11:8 ಯೆಹೆ. 23:3, 8, 19:27:
ಐಗುಪ್ತ ಎಂದೂ ಹೆಸರುಗಳುಂಟು. ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು.
9ಸಕಲ ಜನ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ
11:9 ಕೀರ್ತ. 79:2, 3:
ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ.

10ಈ ಇಬ್ಬರು ಪ್ರವಾದಿಗಳು
11:10 ಪ್ರಕ. 11:5, 6; 1 ಅರಸು. 18:17:
ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು
11:10 ಯೋಹಾ. 16:20; ಪ್ರಕ. 3:10:
ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು.
11ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು,
11:11 ಆದಿ. 2:7; ಯೆಹೆ. 37:5, 9, 10, 14:
ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು.
12ಅನಂತರ ಅವರಿಗೆ,
11:12 ಪ್ರಕ. 4:1:
<<ಇಲ್ಲಿ ಮೇಲಕ್ಕೆ ಏರಿ ಬನ್ನಿರಿ!>> ಎಂದು ಆಕಾಶದಿಂದ ಮಹಾ ವಾಣಿಯು ತಿಳಿಸಿತು. ಅದನ್ನು ಕೇಳಿ ಅವರು
11:12 ಅ. ಕೃ. 1:9; 1 ಥೆಸ. 4:17:
ಮೇಘದಲ್ಲಿ
11:12 ಪ್ರಕ. 12:5; 2 ಅರಸು. 2:11:
ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು.

13ಅದೇ ಗಳಿಗೆಯಲ್ಲಿ
11:13 ಪ್ರಕ. 6:12:
ಮಹಾ ಭೂಕಂಪವುಂಟಾಗಿ
11:13 ಪ್ರಕ. 16:19:
ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು. ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತು ಹೋದರು. ಉಳಿದವರು ಭಯಗ್ರಸ್ತರಾಗಿ
11:13 2 ಪೂರ್ವ. 36:23; ಯೋನ. 1:9:
ಪರಲೋಕದ ದೇವರನ್ನು
11:13 ಯೆಹೋ. 7:19; ಪ್ರಕ. 14:7; 16:9, 19:7:
ಘನಪಡಿಸಿದರು.

14
11:14 ಪ್ರಕ. 8:13; 9:12:
ಎರಡನೆಯ ವಿಪತ್ತು ಕಳೆದುಹೋಯಿತು. ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತಿದೆ.

11:14 ಪ್ರಕ. 10:7:
ಏಳನೆಯ ತುತ್ತೂರಿ

15ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ
11:15 ಪ್ರಕ. 16:17; 19:1:
ಮಹಾಶಬ್ದಗಳುಂಟಾಗಿ,
11:15 ಪ್ರಕ. 12:10:
<<ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ
11:15 ಕೀರ್ತ. 2:2; ಲೂಕ. 9:20; ಅ. ಕೃ. 4:26:
ಆತನ ಕ್ರಿಸ್ತನಿಗೂ ಬಂದಿದೆ,
11:15 ದಾನಿ. 2:44; 7:14, 18, 27; ಲೂಕ. 1:33; ಇಬ್ರಿ. 1:8; ಯೋಹಾ. 12:34:
ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು>> ಎಂಬ ಮಹಾಘೋಷಣೆಯಾಯಿತು.

16ತರುವಾಯ
11:16 ಪ್ರಕ. 4:4:
ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ
11:16 ಪ್ರಕ. 4:10:
ಅಡ್ಡಬಿದ್ದು ,

17<<ಕರ್ತನೇ, ಸರ್ವಶಕ್ತನಾದ ದೇವರೇ,
11:17 ಮೂಲ. ಇರುವಾತನೇ, ಇದ್ದಾತನೇ. ಪ್ರಕ. 16:5; ಪ್ರಕ. 1:4, 8; 4:8:
ಇರುವಾತನೂ ಇದ್ದಾತನೂ,
11:17 ಕೀರ್ತ. 97:1; ಪ್ರಕ. 19:6:
ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ಆಳುತ್ತಿರುವುದರಿಂದ
ನಾವು ನಿನಗೆ ಕೃತಜ್ಞತಾಸುತ್ತಿ ಸಲ್ಲಿಸುತ್ತೇವೆ.

18ಜನಾಂಗಗಳು ಕೋಪಿಸಿಕೊಂಡವು.

11:18 ಕೀರ್ತ. 2:5; 110:5:
ನಿನ್ನ ಕೋಪವೂ ಪ್ರಕಟವಾಯಿತು.
11:18 ಪ್ರಕ. 6:10; 20:12; ದಾನಿ. 7:10; 2 ಥೆಸ. 1:6, 7:
ಸತ್ತವರು ತೀರ್ಪುಹೊಂದುವ ಸಮಯವು ಬಂದಿದೆ.
ನೀನು ನಿನ್ನ ದಾಸರಾದ ಪ್ರವಾದಿಗಳಿಗೂ, ದೇವಜನರಿಗೂ,
11:18 ಪ್ರಕ. 19:5:
ನಿನ್ನ ನಾಮಕ್ಕೆ ಭಯಪಡುವ ಹಿರಿಯರೂ ಕಿರಿಯರೂ ಆಗಿರುವ
ನಿನ್ನ ಭಕ್ತರಿಗೆ ಪ್ರತಿಫಲವನ್ನು ಕೊಡುವುದಕ್ಕೂ
11:18 ಪ್ರಕ. 13:10:
ಲೋಕನಾಶಕರನ್ನು ವಿನಾಶಗೊಳಿಸುವ ಕಾಲವು ಬಂದಿದೆ>>

ಎಂದು ಆತನನ್ನು ಆರಾಧಿಸಿದರು.

11:19 ಪ್ರಕ. 15:5:
ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು.
11:19 ಇಬ್ರಿ. 9:4:
ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು,
11:19 ಪ್ರಕ. 16:21:
ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು.

19

Copyright information for KanULB